ಸಿಹಿ ಕನಸು
ನಿನ್ನ ಹೃದಯ ನಾ ಹೊಕ್ಕಾಗ
ಸಿಹಿ ಕನಸೊಂದು ಸ್ವಾಗತಿಸಿತ್ತು
ಒಡಲೊಳಗಿನ ಪ್ರಪಂಚ ಪರಿಚಯಿಸಿತ್ತು
ಆದರಿಸಿ, ಸತ್ಕರಿಸಿತ್ತು
ನೀನು ನನ್ನವಳಾದಾಗ
ನಮ್ಮಿಬ್ಬರನ್ನು ಪ್ರೇಮಿಸಿತ್ತು
ನಿನ್ನ ಪ್ರೀತಿ ಅನುರಾಗದ ಸಂದೇಶ
ನನ್ನೋಡಲಿಗೆ ರವಾನಿಸಿತ್ತು
ನಾ ಅತ್ತಾಗ, ಕಣ್ಣಿರಿತ್ತಾಗ
ಸಂತೈಸಿ ರಮಿಸಿತ್ತು
ನಿನ್ನ ಬರುವಿಗಾಗಿ ಕಾದಾಗ
ತಾಳ್ಮೆ ತುಂಬಿತ್ತು
ನಮ್ಮ ಪ್ರೀತಿ ಅಂಕುರಿಸುವಾಗಲೇ
ಸಿಹಿ ಕನಸು ಸತ್ತಿತ್ತು
ನಿನ್ನ ಕಳೆದು ನಾ ಬೆಂಡಾಗ
ಕನಸಿತ್ತು ಎಂಬುದೊಂದೇ ಉಳಿದಿತ್ತು.
ವಿಘ್ನೇಶ್ ಹೊಳ್ಳ ತೆಕ್ಕಾರು